ಪರಿಸರ ಮೇಲೆ ಪರಿಣಾಮ ಬೀರುತ್ತಿರುವ *ಹಾಗೂ ಅಪಾಯವನ್ನುಂಟುಮಾಡುವ ವಿಷಕಾರಿ ರಾಸಾಯನಿಕ ತ್ಯಾಜ್ಯವನ್ನು ಸುರಿದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಹುಮನಾಬಾದ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ*
ಪರಿಸರ ಮೇಲೆ ಪರಿಣಾಮ ಬೀರುತ್ತಿರುವ ಹಾಗೂ ಅಪಾಯವನ್ನುಂಟುಮಾಡುವ ವಿಷಕಾರಿ ರಾಸಾಯನಿಕ ತ್ಯಾಜ್ಯವನ್ನು ಸುರಿದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಹುಮನಾಬಾದ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಮದ್ಯಾಹ್ನ ಜರುಗಿದೆ.
ಪಟ್ಟಣದ ಹೊರವಲಯದಲ್ಲಿರುವ ಕೈಗಾರಿ ಪ್ರದೇಶದ ನಿಚೋನಿ ಕಾರ್ಖಾನೆಯ ಹಿಂಬದಿಯಲ್ಲಿ ಕಾರ್ಖಾನೆಯ ಖಾಲಿ ಜಾಗದಲ್ಲಿರು ಎರಡು ತೆಗ್ಗಿನಲ್ಲಿ ಒಂದು ವಾರದ ಹಿಂದೆ ವಿಷಕಾರಿ ರಾಸಾಯನಿಕ ತ್ಯಾಜ್ಯವನ್ನು ಸುರಿಯಲಾಗಿತ್ತು ಎಂದು ಹೇಳಲಾಗುತ್ತಿರುವ ಸ್ಥಳದಲ್ಲಿ ಇದೀಗ ಬೆಂಕಿ ಅವಘಡಿಸಿದೆ ಎಂದು ಹೇಳಲಾಗಿದೆ. ಕಳೆದ ಶನಿವಾರ ಅಷ್ಟೆ ತಾಲೂಕಿನ ಮೋಳಕೇರಾ ಗ್ರಾಮದಲ್ಲಿ ರಾಸಾಯನಿಕ ದಿಂದ ಸ್ಪೋಟ ಉಚಿಟಾಗಿ ಆರು ಜನರು ಗಾಯಗೊಂಡಿರುವ ಹಿನ್ನಲ್ಲೆ ಪೊಲೀಸ್ ಕಾರ್ಯಾಚರಣೆ ವೇಳೆ ಇದೆಲ್ಲ ಹೋರ ಬರಲಿದೆ ಎಂದು ಸಂಬAಧಿತ ಕಾರ್ಖಾನೆಯವರು ಬೆಂಕಿ ಹಚ್ಚಿರಬಹುದು ಎಂದು ಸ್ಥಳದಲ್ಲಿ ಸೇರಿದ ಕೇಲವರು ಶಂಕೆ ಇನ್ನೊಂದಡೆ ವ್ಯಕ್ತಪಡಿಸುತ್ತಿದ್ದರು. ಬೆಂಕಿಯಿAದ ಕೈಗಾರಿಕಾ ಪ್ರದೇಶದಲ್ಲಿ ಕೇಲ ಸಮಯ ಭೀತಿ ಸೃಷ್ಟಿಯಾಗಿತ್ತು.
ಸ್ಥಳಕ್ಕೆ ಡಿ.ವಾಯ್.ಎಸ್.ಪಿ ಮಡೊಳಪ್ಪ, ಸಿಪಿಐ ಸಂತೋಷ ತಟಪಳ್ಳಿ, ಪಿಎಸ್‌ಐ ಸುರೇಶಕುಮಾರ, ಜಿಲ್ಲಾ ಪರಿಸರ ಅಧಿಕಾರಿ ಮೃತ್ಯುಂಜಯ, ಸಂತೋಷ, ಅಗ್ನಿ ಶಾಮಕ ಠಾಣಾಧಿಕಾರಿ ಪಂಡರಿನಾಥ ಹಾಗೂ ಸಿಬ್ಬಂದಿಗಳು ಸೇರಿದಂತೆ ಪಕ್ಕದ ಕಾರ್ಖಾನೆಯ ಸಿಬ್ಬಂದಿಗಳ ಸಹಕಾರದಿಂದ ಬೆಂಕಿ ನಂದಿಸುವಲ್ಲಿ ಯಶಸ್ಸು ಕಂಡಿದ್ದರು.
ಹೇಳಿಕೆ
ಡಿ.ವಾಯ್.ಎಸ್.ಪಿ ಮಡೊಳಪ್ಪ
ಶೀಘ್ರದಲ್ಲೆ ವಿಷಯುಕ್ತ ರಾಸಾಯನಿಕ ತ್ಯಾಜ್ಯ ಇಲ್ಲಿ ಸ್ಥಳಾಂತರ ಮಾಡಿದ್ದಾರೆ ಹಾಗೂ ಘಟನೆಗೆ ಕಾರಣರಾದವರ ಪತ್ತೆ ಹಚ್ಚಿ ಅವರ ವಿರುದ್ಧ ಮೂಲ್ಲಾಜಿ ಇಲ್ಲದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಖಾಲಿ ನಿಷೇಸ ಮಾಲಿಕರ ವಿರುದ್ಧ ಪರಿಸರ ಇಲಾಖೆಯಿಂದ ದೂರು ನೀಡಿದಲ್ಲಿ ವ ಮಾಲಿಕರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ
ಹೇಳಿಕೆ
ಜಿಲ್ಲಾ ಪರಿಸರ ಅಧಿಕಾರಿ ಮೃತ್ಯುಂಜಯ,
ಕೈಗಾರಿಕಾ ಪ್ರದೇಶದಲ್ಲಿ ನೀಡಿರುವ ಸ್ಥಳದಲ್ಲಿ ರಾಸಾಯನಿಕ ತ್ಯಾಜ್ಯ ಸಂಗ್ರಹ ಸೇರಿದಂತೆ ಅನೈತಿಕ ಕೇಲಸಕ್ಕೆ ಬಳಸಲಾಗುತ್ತಿರುವ ಕುರಿತು ಕಾರ್ಖಾನೆಯ ಮಾಲಿಕರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುಲಾಗುವುದು.