INDIAN PRESS UNION.

INDIAN PRESS UNION.

February 9, 2026

ಹೋರಗಡೆ ಅಗರಬತ್ತಿ ತಯ್ಯಾರಿಕಾ ಘಟಕ ಎಂದು ನಾಮಫಲಕ ಒಳಗಡೆ ಕಾನೂನುಬಾಹಿರವಾಗಿ ನೂರಾರು ಬ್ಯಾರಲ್ ರಾಸಾಯನಿಕ ಮಿಶ್ರಿತ ಸಾಲ್ವೆಂಟ್ ಸಂಗ್ರಹ ಅನಾಹುತ ಆದಲ್ಲಿ ಯಾರು ಹೋನೆ ಎಂದು ತಹಸೀಲ್ದಾರ ಅಂಜುಮ್ ತಬಸುಮ್ ಅವರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿವರಿಗೆ ತರಾಟೆಗೆ ತೆಗೆದುಕೊಂಡರು

ಹೋರಗಡೆ ಅಗರಬತ್ತಿ ತಯ್ಯಾರಿಕಾ ಘಟಕ ಎಂದು ನಾಮಫಲಕ ಒಳಗಡೆ ಕಾನೂನುಬಾಹಿರವಾಗಿ ನೂರಾರು ಬ್ಯಾರಲ್ ರಾಸಾಯನಿಕ ಮಿಶ್ರಿತ ಸಾಲ್ವೆಂಟ್ ಸಂಗ್ರಹ ಅನಾಹುತ ಆದಲ್ಲಿ ಯಾರು ಹೋನೆ ಎಂದು ತಹಸೀಲ್ದಾರ ಅಂಜುಮ್ ತಬಸುಮ್ ಅವರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿವರಿಗೆ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಹೋರವಲಯದ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡ ಹಿನ್ನಲ್ಲೆ ತಹಸೀಲ್ದಾರ ನೆತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿ ಏಕ ಕಾಲಕ್ಕೆ ಅಧಿಕಾರಿಗಳ ನಿಯೋಗ ಭೇಟಿ ನೀಡಿ ಕಾರ್ಖಾನೆಗೆ ಸಂಬAಧಿತ ದಾಖಲೆಗಳನ್ನು ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಸುರಕ್ಷತಾ ನಿಯಮ ಪಾಲನೆ, ಬಾಯ್ಲರ್‌ಗಳ ಮತ್ತು ಕಾರ್ಖಾನೆ ಪರವಾನಗಿಗಳ ಅನುಮತಿಗಳು ಮತ್ತು ನವೀಕರಣ, ಉತ್ಪಾದನಾ, ಪರಿಸರ, ಕಾರ್ಮಿಕರ ಸುರಕ್ಷತೆ ಮತ್ತು ದಾಖಲೆಗಳನ್ನು ತಪಾಸಣೆ ಕುರಿತು ಪರಿಶೀಲನೆ ನಡೆಸಲಾಗಿದೆ. ಯಾವ ಉಪಯೋಗಕ್ಕೆ ಕೈಗಾರಿಕೆ ನಿವೇಶನ ಪಡೆಯಲಾಗಿದೆ ಅದನ್ನು ಬಿಟ್ಟು ಬೇರೆ ಉದ್ದೇಶಕ್ಕೆ ಉಪಯೋಗಿಸಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.

ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕನಿಷ್ಠ ಪ್ರತಿ ತಿಂಗಳಿಗೊಮ್ಮೆ ಕಾರ್ಖಾನೆಯ ನಿಜ ಮಾಲಿಕರು ನಿವೇಶನದ ಸದ್ಬಳಕೆ ಮಾಡುತ್ತಿರುವ ಕುರಿತು ತನಿಖೆ ನಡೆಸಬೇಕು ಆದರೆ ಒಂದು ತಪ್ಪಿನಿಂದ ಅನೇಕರ ಪ್ರಾಣಕ್ಕೆ ಸಂಕಟ ಬರಲಿದೆ. ಇದಕ್ಕೆ ಮೊನ್ನೆಯಾದ ಬೆಂಕಿ ಅವಘಡ ಸಾಕ್ಷಿ ಎಂದು ಹೇಳಿದರು. ಇಗಾಗಲ್ಲೆ ವಿವಿಧ ಕಾರ್ಖಾನೆಗಳಿಗೆ ತೆರಳಿದ ಅಧಿಕಾರಿಗಳು ವಸ್ತುಸ್ಥಿತಿಯನ್ನು ವರದಿ ಮಾಡಿಕೊಂಡಿದ್ದಾರೆ.

ಡಿವಾಯ್‌ಎಸ್‌ಪಿ ಮಡೋಳಪ್ಪ, ಪಿಎಸ್‌ಐ ಸುರೇಶಕುಮಾರ, ತಾಲೂಕ ಪಂಚಾಯತ್ ಕಾರ್ಯ ನಿವಾರ್ಹಕ ಅಧಿಕಾರಿ ದೀಪಿಕಾ ನಾಯ್ಕಲ್, ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಾಣಾಧಿಕಾರಿ ಮೃತ್ಯುಂಜಯ, ಸಂತೋಷ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿ ಪ್ರೇಮಲತಾ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ ಅಧಿಕಾರಿ ವನೀತಾ, ಮೋಹನದಾಸ, ಕಾರ್ಮಿಕ ನೀರಿಕ್ಷಕ ರಾಹುಲ, ಲಕ್ಷಿö್ಮಣ, ಅಗ್ನಿಶಾಮಕ ಠಾಣೆ ಸೇರಿದಂತೆ ಅನೇಕರು ಕಾರ್ಖಾನೆಗಳಿಗೆ ಭೇಟಿ ನೀಡಿದ್ದರು.

Leave a Reply

Your email address will not be published. Required fields are marked *

© 2026 All Rights Reserved