INDIAN PRESS UNION.

INDIAN PRESS UNION.

February 6, 2026

ಕಾರ್ಖಾನೆಗಳ ಕಚ್ಚಾ ಸಾಮಗ್ರಿಗಳ ಬಳಕೆ, ಉತ್ಪಾದನೆ, ಕಾರ್ಮಿಕರ ನಿರ್ವಹಣೆ, ಸುರಕ್ಷತಾ ನಿಯಮಗಳು, ಸಂಸ್ಕರಣಾ ಘಟಕ, ಮಾಲಿನ್ಯ ನಿಯಂತ್ರಣ, ಬಾಯ್ಲರ್‌ಗಳ ನೋಂದಣಿ ಮತ್ತು ಪ್ರಮಾಣಪತ್ರ ನವೀಕರಣ, ಪರವಾನಗಿ ಮತ್ತು ನವೀಕರಣ, ಕಾರ್ಖಾನೆಯಲ್ಲಿ ಸಂಭವಿಸುವ ಅಪಘಾತಗಳ ಸುರಕ್ಷತೆ ಕುರಿತು ಪೊಲೀಸರು ದಾಳಿ ನಡೆಸಿ ಮಾಹಿತಿ ಕಲೆ ಹಾಕಲಾಗಿದೆ

ಕಾರ್ಖಾನೆಗಳ ಕಚ್ಚಾ ಸಾಮಗ್ರಿಗಳ ಬಳಕೆ, ಉತ್ಪಾದನೆ, ಕಾರ್ಮಿಕರ ನಿರ್ವಹಣೆ, ಸುರಕ್ಷತಾ ನಿಯಮಗಳು, ಸಂಸ್ಕರಣಾ ಘಟಕ, ಮಾಲಿನ್ಯ ನಿಯಂತ್ರಣ, ಬಾಯ್ಲರ್‌ಗಳ ನೋಂದಣಿ ಮತ್ತು ಪ್ರಮಾಣಪತ್ರ ನವೀಕರಣ, ಪರವಾನಗಿ ಮತ್ತು ನವೀಕರಣ, ಕಾರ್ಖಾನೆಯಲ್ಲಿ ಸಂಭವಿಸುವ ಅಪಘಾತಗಳ ಸುರಕ್ಷತೆ ಕುರಿತು ಪೊಲೀಸರು ದಾಳಿ ನಡೆಸಿ ಮಾಹಿತಿ ಕಲೆ ಹಾಕಲಾಗಿದೆ.

ಪಟ್ಟಣದ ಹೋರವಲಯದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ಹಾಗೂ ಟೈರ್ ಪೇರೋಲೆಸಸ್ಸ ಕಾರ್ಖಾನೆ ಸೇರಿದಂತೆ ವಿವಿಧ ಕಾರ್ಖಾನೆಗಳ ಮೇಲೆ ಡಿವಾಯ್‌ಎಸ್‌ಪಿ ಮಡೋಳಪ್ಪ ಮಾರ್ಗದರ್ಶನ ಹಾಗೂ ಸಿಪಿಐ ಸಂತೋಷ ತಟ್ಟಪಳ್ಳಿ ನೆತೃತ್ವದಲ್ಲಿ ದಾಳಿ ನಡೆಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು. ನಿನ್ನೆ ಕೈಗಾರಿಕಾ ಪ್ರದೇಶದಲ್ಲಿ ನಡೆದ ಬೆಂಕಿ ಅವಘಡ ಹಾಗೂ ಮೋಳಕೇರಾ ಗ್ರಾಮದಲ್ಲಿ ನಿಗೋಡ ಸ್ಫೋಟ ಹಿನ್ನಲ್ಲೆ ಪ್ರತಿನಿತ್ಯ ಕಾರ್ಖಾನೆಗಳ ಎಷ್ಟು ವಾಹನ ರಾಸಾಯನಿಕ ತ್ಯಾಜ್ಯ ಹೋರಹೊಗುತ್ತವೆ. ಕೈಗಾರಿಕಾ ಪ್ರದೇಶದಲ್ಲಿ ಎಲ್ಲಾದರೂ ತ್ಯಾಜ್ಯ ಹರಿಬಿಡಲಾಗಿದೆ ಕುರಿತು ತನಿಖೆ ಮೂಲಕ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಹಾಗೂ ನಿಯಮಬಾಹಿರ ಚಟುವಟಿಕೆಗಳು ಕಡಿವಾಣ ಹಾಕಲು ದಿನವಿಡೀ ಕೈಗಾರಿಕಾ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಕಾರ್ಖಾನೆಗಳ ಪ್ರತಿಯೋಬ್ಬ ವ್ಯವಸ್ಥಾಪಕರು ಸೇರಿದಂತೆ ಕಾರ್ಖಾನೆಗೆ ಸಂಬAಧಿತರಿAದ ನೇರವಾಗಿ ವಿಚಾರಣೆ ನಡೆಸುವ ಮೂಲಕ ಕಾರ್ಖಾನೆಯಲ್ಲಿ ತಯಾರಾಗುವ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಿನ್ನೆಯ ಬೆಂಕಿ ಅವಘಡ ಸ್ಥಳದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಅಪರಾಧ ಸ್ಥಳ (ಎಸ್.ಒ.ಸಿ.ಒ) ಪರಿಶೀಲನಾ ಇಲಾಖೆ ರಾಜಕುಮಾರ ಕಟ್ಟಿ ತಂಡದಿAದ ರಾಸಾಯನಿಕ ತ್ಯಾಜ್ಯ ಮಾದರಿ ಸಂಗ್ರಹಿಸಿ ಯಾವ ಕಾರ್ಖಾನೆಯಿಂದ ಈ ರಾಸಾಯನಿಕ ತ್ಯಾಜ್ಯ ಇದೆ ಎನ್ನುವ ಕುರಿತು ಉನ್ನತ ಮಟ್ಟದ ತನಿಖೆಗೆ ಬೆಂಗಳೂರು ವಿಜ್ಞಾನ ಕೇಂದ್ರಕ್ಕೆ ರವಾನಿಸಲಾಯಿತು.

ಡಿ.ವಾಯ್.ಎಸ್.ಪಿ ಮಡೋಳಪ್ಪ ಮಾರ್ಗದರ್ಶನ ಹಾಗೂ ಸಿಪಿಐ ಸಂತೋಷ ತಟಪಳ್ಳಿ ನೇತೃತ್ವದಲ್ಲಿ, ಪಿಎಸ್‌ಐ ಸುರೇಶಕುಮಾರ, ಸಂಚಾರಿ ಪೊಲೀಸ ಸೇರಿದಂತೆ ಇಬ್ಬರು ಸಿಪಿಐ, ಹತ್ತು ಪಿಎಸ್‌ಐ, 40 ಸಿಬ್ಬಂದಿಗಳು, ಸೇರಿದಂತೆ 10 ತಂಡಗಳನ್ನು ರಚಿಸಿ ಏಕ ಕಾಲಕ್ಕೆ ವಿವಿಧ ಕಾರ್ಖಾನೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರೀಶಿಲಿಸುವ ಮೂಲಕ ಮಾಹಿತಿ ಸಂಗ್ರಹಿಸಿದರು. ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ಮೃತ್ಯುಂಜಯ, ಸಂತೋಷ ಇದ್ದರು.

1 Comment

Leave a Reply to BAJARANG TIWARI Cancel reply

Your email address will not be published. Required fields are marked *

© 2026 All Rights Reserved