National

HDD Honours

By VIJAY KUMAR H L • 2026-10-19 04:11 • 5 views   Share WhatsApp Share Facebook Share X
HDD Honours

ಶ್ರೀ ಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠ,
ಭಾರತ ಸರ್ಕಾರದ ಮಾಜಿ ಪ್ರಧಾನ ಮಂತ್ರಿಗಳು, ಕರ್ನಾಟಕದ ಧೀಮಂತ ಪ್ರಜಾಪ್ರತಿನಿಧಿ ಭಾರತದ ಹಿರಿಯ ಜನನಾಯಕರು ಆದ ಸನ್ಮಾನ್ಯ ಶ್ರೀ ಹೆಚ್. ಡಿ. ದೇವೇಗೌಡರವರಿಗೆ ಅರ್ಪಿಸುವ ಗೌರವಪೂರ್ವಕ ಪ್ರಶಸ್ತಿ ಪತ್ರ, ಚಾವುಂಡರಾಯರು ಅಂದು ಬರೆದ ಅಭಿವೃದ್ಧಿಯ ಚಾರಿತ್ರಿಕ ಅಧ್ಯಾಯವನ್ನು, ಆಧುನಿಕ ಕಾಲಘಟ್ಟದಲ್ಲಿ ತಮ್ಮ ಶ್ರಮ ಹಾಗೂ ಜನಪರ ಸೇವೆಯ ಮೂಲಕ ಪುನರಾವರ್ತಿಸಿದ ನಿಮ್ಮ ಈ ಅಪಾರ ಸೇವೆಯನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತಾ, ಶ್ರೀ ಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ವತಿಯಿಂದ ತಮಗೆ ಅತ್ಯಂತ ಗೌರವ ಹಾಗೂ ಅಭಿಮಾನಗಳಿಂದ: ಶ್ರೀ ಚಾವುಂಡರಾಯ ಪ್ರಶಸ್ತಿಯನ್ನು ಪ್ರದಾನ ಮಾಡಿ, ವಿಶ್ವಪ್ರಸಿದ್ಧ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯವರ ಹಾಗೂ ಶ್ರವಣಬೆಳಗೊಳದ ಅಧಿದೇವತೆ ಶ್ರೀ ಕೋಶ್ಮಂಡಿನೀ ದೇವಿಯ ದಿವ್ಯ ಅನುಗ್ರಹವು ನಿಮ್ಮ ಮೇಲೆಯೂ, ನಿಮ್ಮ ಸಮಸ್ತ ಕುಟುಂಬದ ಮೇಲೆಯೂ ಸದಾ ಇರಲಿ. ಭಗವಂತನು ತಮಗೆ ಉತ್ತಮ ಆರೋಗ್ಯ,
ಸುಖ, ಶಾಂತಿ ಹಾಗೂ ನಾಡಿಗೆ ಸೇವೆ ಸಲ್ಲಿಸುವ ನಿರಂತರ ಶಕ್ತಿಯನ್ನು ಕರುಣಿಸಲಿ ಎಂದು ಶ್ರೀ ಕ್ಷೇತ್ರ ಶ್ರವಣಬೆಳಗೊಳ ಗುರುಪೀಠದಿಂದ ಹೃದಯಪೂರ್ವಕವಾಗಿ ಆಶೀರ್ವದಿಸುತ್ತೇವೆ.

ಕನ್ನಡ ನಾಡಿನ ಅಪೂರ್ವ ನಾಯಕತ್ವ ಹಾಗೂ ಪ್ರಥಮ ಪ್ರಜಾಪ್ರತಿನಿಧಿಯ ಚಾರಿತ್ರಿಕ ಜವಾಬ್ದಾರಿ. ತಾವು ಜಿಲ್ಲೆಯ ಪುಣ್ಯಭೂಮಿಯಲ್ಲಿ ಜನಿಸಿ, ಈ ಮಣ್ಣಿನ ಪ್ರತಿಯೊಂದು ಅಣುವಿನೊಂದಿಗೂ ಭಾವನಾತ್ಮಕ ಹಾಗೂ ಆತ್ಮೀಯ ಸಂಬಂಧವನ್ನು ಬೆಳೆಸಿಕೊಂಡು ಬಂದವರು ನೀವು. ಸಾಮಾನ್ಯ ರೈತ ಕುಟುಂಬದಿಂದ ಬಂದು, ತಮ್ಮ ನಿರಂತರ ಶ್ರಮ, ಕಠಿಣ ಪರಿಶ್ರಮ, ಜನ ಹಾಗೂ ರೈತಪರ ಕಾಳಜಿ ಹಾಗೂ ದೂರದೃಷ್ಟಿಯ ಚಿಂತನೆಗಳಿಂದ ಭಾರತ ದೇಶದ ಅತ್ಯುನ್ನತ ಮತ್ತು ಶ್ರೇ? ಹುದ್ದೆಯಾದ ಭಾರತ ಸರ್ಕಾರದ ಪ್ರಧಾನ ಮಂತ್ರಿ ಪದವಿಯನ್ನು ಅಲಂಕರಿಸಿದ ಕರ್ನಾಟಕದ ಪ್ರಥಮ ಪ್ರಜಾಪ್ರತಿನಿಧಿ ಎಂಬ ಐತಿಹಾಸಿಕ ಕೀರ್ತಿ ನಿಮಗೇ ಸಲ್ಲುತ್ತದೆ.
ದೇಶದ ಆಡಳಿತವನ್ನು ಅತ್ಯಂತ ದಕ್ಷತೆ ಮತ್ತು ಪ್ರಾಮಾಣಿಕತೆ ಹಾಗೂ ಪಾರದರ್ಶಕವಾಗಿ ಮುನ್ನಡೆಸಿ, ರಾಜ್ಯ ಹಾಗೂ ದೇಶದ ಹಿತಾಸಕ್ತಿಗಳನ್ನು ಕಾಯುವಲ್ಲಿ ತಾವು ತೋರಿದ ಜಾಣ್ಮೆ, ಕಾಳಜಿ ಮತ್ತು ಜವಾಬ್ದಾರಿ ಇಡೀ ಕರ್ನಾಟಕಕ್ಕೆ, ಅದರಲ್ಲೂ ವಿಶೇ?ವಾಗಿ ಹಾಸನ ಜಿಲ್ಲೆಯ ಸಮಸ್ತ ಜನತೆಗೆ ಅತ್ಯಂತ ಹೆಮ್ಮೆ-ಅಭಿಮಾನ ಹಾಗೂ ಗೌರವದ ವಿ?ಯವಾಗಿದೆ.
ರಾಜಕೀಯ ಜೀವನದ ಅತ್ಯುನ್ನತ ಎತ್ತರದಲ್ಲಿದ್ದಾಗಲೂ ತಮ್ಮ ಸರಳತೆ, ವಿನಯ, ಗ್ರಾಮೀಣ ಸೊಗಡು ಮತ್ತು ತಾಯಿ ನಾಡಿನ ಮೇಲಿನ ಪ್ರೀತಿಯನ್ನು ಎಂದಿಗೂ ಬಿಟ್ಟುಕೊಡದ ನಿಮ್ಮ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾದದ್ದು.
ಹಾಸನ ಜಿಲ್ಲೆಯ ಸಮಗ್ರ ವಿಕಾಸ ಹಾಗೂ ಜಲಸಂಜೀವಿನಿ ಯೋಜನೆಗಳು. ಹಾಸನ ಜಿಲ್ಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಸಮಗ್ರ ಪ್ರಗತಿ ಹಾಗೂ ಪ್ರತಿಯೊಬ್ಬ ಸಾರ್ವಜನಿಕನ ಕ್ಷೇಮಾಭಿವೃದ್ಧಿಯ ದೃಷ್ಟಿಯಿಂದ ತಾವು ಕೈಗೊಂಡ ಸುದೀರ್ಘ ಹಾಗೂ ಅಪ್ರತಿಮ ಸೇವೆ ಚಿರಸ್ಮರಣೀಯ.
ಕೃಷಿ ಮತ್ತು ನೀರಾವರಿ ಕ್ರಾಂತಿ. ನಾಡಿನ ರೈತರ ಕ?-ನ?ಗಳಿಗೆ ಸದಾ ಮಿಡಿಯುವ ಹೃದಯ ಹೊಂದಿರುವ ತಾವು, ರೈತ ಸಮುದಾಯದ ಸಶಕ್ತೀಕರಣಕ್ಕಾಗಿ, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ನೀರಾವರಿ ಯೋಜನೆಗಳ ವಿಸ್ತರಣೆಗಾಗಿ ಹಗಲಿರುಳು ಶ್ರಮಿಸಿದ್ದೀರಿ.ಕುಡಿಯುವ ನೀರು ಮತ್ತು ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ತಾವು ರೂಪಿಸಿದ ಯೋಜನೆಗಳು ಲಕ್ಷಾಂತರ ಕುಟುಂಬಗಳ ಬದುಕಿಗೆ ಜಲ ಸಂಜೀವಿನಿಯಾಗಿವೆ. ನೀರಿನ ಫಲವನ್ನು ಕೋಟ್ಯಂತರ ಮಂದಿ ಪಡೆಯುತ್ತಿರುವುದು ನಿಮ್ಮ ಬದ್ಧತೆಗೆ ಹಿಡಿದ ಕನ್ನಡಿ.



ಸಾರಿಗೆ ಹಾಗೂ ಕೈಗಾರಿಕಾ ಕ್ಷೇತ್ರ. -೨- ಹೆದ್ದಾರಿಗಳ ನಿರ್ಮಾಣ, ರಸ್ತೆ ಸಾರಿಗೆ ಜಾಲದ ವಿಸ್ತರಣೆ, ಕೈಗಾರಿಕಾ ವಲಯಗಳ ಸ್ಥಾಪನೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ತಾವು ನೀಡಿದ ಕೊಡುಗೆ ಹಾಸನ ಜಿಲ್ಲೆಯನ್ನು ರಾಜ್ಯದ ಪ್ರಮುಖ ಅಭಿವೃದ್ಧಿ ಕೇಂದ್ರವನ್ನಾಗಿ ಪರಿವರ್ತಿಸಿದೆ. ಇಂತಹ ನಿರಂತರ, ಅನನ್ಯ ಹಾಗೂ ಜನೋಪಯೋಗಿ ಸೇವೆಗಳ ಮೂಲಕವೇ ಪ್ರತಿಯೊಬ್ಬರ ’ಹಾಸನದ ಮಣ್ಣಿನ ಮಗ’ ಎಂದೇ ಪ್ರತಿಯೊಬ್ಬರ ಹೃದಯದಲ್ಲೂ ಚಿರಪರಿಚಿತರಾಗಿದ್ದೀರಿ.
ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಮೇಲಿನ ಅಪಾರ ಭಕ್ತಿ-ಶ್ರದ್ಧೆ ಹಾಗೂ ಪಾವನ ಸಂಬಂಧ. ನೀವು ವಿಶ್ವಪ್ರಸಿದ್ಧ ಅಹಿಂಸಾ ತಪೋ ಭೂಮಿಯಾದ ಶ್ರೀ ಕ್ಷೇತ್ರ ಶ್ರವಣ ಬೆಳಗೊಳ, ಇಲ್ಲಿ ನೆಲೆಸಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯವರ ದಿವ್ಯ ಸನ್ನಿಧಿ ಹಾಗೂ ಇಲ್ಲಿನ ಪರಂಪರಾಗತ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ಮೇಲೆ ತಾವು ಹೊಂದಿರುವ ಶ್ರದ್ಧೆ, ಭಕ್ತಿ ಮತ್ತು ಗೌರವ ಅಪಾರವಾದದ್ದು. ಈ ಪಾವನ ಕ್ಷೇತ್ರದ ಪಾವಿತ್ರತೆಯನ್ನು, ಐತಿಹಾಸಿಕ ಮಹತ್ವ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ಅತ್ಯಂತ ಎತ್ತರದಲ್ಲಿ ಗೌರವಿಸಿದ ಮಹಾನ್ ನಾಯಕರು ತಾವು.
ಶ್ರವಣಬೆಳಗೊಳದ ಶಾಶ್ವತ ಕುಡಿಯುವ ನೀರಿಗೆ ಅಭಯ ಕೊಡುಗೆ. ಒಂದು ಕಾಲದಲ್ಲಿ ಕಲ್ಲು-ಬಂಡೆಗಳಿಂದ ಕೂಡಿ, ಬರಡು ಭೂಮಿಯಾಗಿ, ಕುಡಿಯುವ ನೀರಿಗಾಗಿ ತೀವ್ರ ಹಾಹಾಕಾರ ಪರಿಸ್ಥಿತಿ ಎದುರಿಸುತ್ತಿದ್ದ ಶ್ರವಣಬೆಳಗೊಳದ ಕಠಿಣ ಪರಿಸ್ಥಿತಿಯನ್ನು ತಾವು ಅತ್ಯಂತ ಹತ್ತಿರದಿಂದ ಕಂಡವರು. ಈ ಪಾವನ ಕ್ಷೇತ್ರದ ಭಕ್ತಾದಿಗಳಿಗೆ, ಯಾತ್ರಿಕರಿಗೆ ಹಾಗೂ ಈ ಊರಿನ ನಿವಾಸಿಗಳಿಗೆ ಶಾಶ್ವತ ನೀರಿನ ಸೌಲಭ್ಯ ಕಲ್ಪಿಸಲು ನಿಶ್ಚಯಿಸಿದ ತಾವು, ಹೇಮಾವತಿ ಜಲಾಶಯದಿಂದ ಶ್ರವಣಬೆಳಗೊಳಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದೀರಿ. ಮೈಲುಗಳ ದೂರದಿಂದ ಜಲಧಾರೆ ಹರಿದು ಬಂದು ಶ್ರವಣ ಬೆಳಗೊಳದ ಪ್ರತಿಯೊಂದು ಮನೆಗೂ, ಪ್ರತಿಯೊಬ್ಬ ಭಕ್ತನಿಗೂ ಕುಡಿಯುವ ನೀರನ್ನು ಒದಗಿಸುವಂತೆ ಮಾಡಿದ ನಿಮ್ಮ ಈ ಜಲದಾನದ ಪುಣ್ಯಕಾರ್ಯ ಸದಾ ಸ್ಮರಣೀಯ, ನಿಮ್ಮ ದೂರದೃಷ್ಟಿಯ ಕಾರ್ಯದಿಂದ ಈ ಊರಿನ ಜನರ ಮತ್ತು ಕ್ಷೇತ್ರಕ್ಕೆ ಆಗಮಿಸುವ ಲಕ್ಷಾಂತರ ಯಾತ್ರಿಕರ ಬಾಯಾರಿಕೆಯನ್ನು ಇಂದಿಗೂ ಶಾಶ್ವತವಾಗಿ ನೀಗಿಸುತ್ತಿದೆ.
ಮೂಲಭೂತ ಸೌಕರ್ಯಗಳು ಹಾಗೂ ಕ್ಷೇತ್ರದ ನಾಗರಿಕ ಪ್ರಗತಿ. ಶ್ರವಣಬೆಳಗೊಳವು ಕೇವಲ ಒಂದು ಯಾತ್ರಾ ತಾಣವಾಗಿ ಉಳಿಯದೆ, ಸರ್ವಸಜ್ಜಿತ ಮಾದರಿ ನಗರವಾಗಿ ಬೆಳೆಯಲು ತಾವು ನೀಡಿದ ಕೊಡುಗೆ ಅಪಾರ.

ಸಾರಿಗೆ ವ್ಯವಸ್ಥೆ ಹಾಗೂ ಸುಸಜ್ಜಿತ ಬಸ್ ನಿಲ್ದಾಣ. ಕ್ಷೇತ್ರಕ್ಕೆ ಬರುವ ಸಾರ್ವಜನಿಕರ ಹಾಗೂ ದೇಶ-ವಿದೇಶಗಳ ಯಾತ್ರಿಕರ ಪ್ರಯಾಣದ ಸೌಲಭ್ಯಕ್ಕಾಗಿ ಅತ್ಯಾಧುನಿಕ ಹಾಗೂ ವಿಶಾಲವಾದ ಬಸ್ ನಿಲ್ದಾಣ ನಿರ್ಮಾಣವಾಗುವಲ್ಲಿ ನಿಮ್ಮ ಪಾತ್ರ ಪ್ರಮುಖವಾದದ್ದು.



ಆರೋಗ್ಯ ಸೇವೆ.
ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಶ್ರವಣಬೆಳಗೊಳದಲ್ಲಿ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ (ಅommuಟಿiಣಥಿ ಊeಚಿಟಣh ಅeಟಿಣಡಿe) ರೂಪುಗೊಳ್ಳಲು ತಮ್ಮ ದೂರದೃಷ್ಟಿಯೇ ಕಾರಣ.
ಅಂಚೆ ಕಚೇರಿ ಹಾಗೂ ವಿದ್ಯುತ್ ಪ್ರಸರಣ ಕೇಂದ್ರ. ಆಧುನಿಕ ಸಂಪರ್ಕ ಸಾಧನವಾದ ಸುಸಜ್ಜಿತ ಅಂಚೆ ಕಚೇರಿ ಹಾಗೂ ಕ್ಷೇತ್ರದಾದ್ಯಂತ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಲು ೬೬/೧೧ ಕೆ.ವಿ.ಎ. ವಿದ್ಯುತ್ ವಿತರಣಾ ಉಪಕೇಂದ್ರ ಕೇಂದ್ರವನ್ನು ಸ್ಥಾಪಿಸುವಲ್ಲಿ ತಾವು ತೋರಿದ ಶ್ರಮ ಅಗ್ರಗಣ್ಯ.
ಶ್ರವಣಬೆಳಗೊಳ ರೈಲು ನಿಲ್ದಾಣ. ಹಲವು ದಶಕಗಳ ಕಾಲ ಈ ಭಾಗದ ಜನರ ಕನಸಾಗಿದ್ದ ಬೆಂಗಳೂರು - ಹಾಸನ - ಮಂಗಳೂರು ರೈಲು ನೇರ ಸಂಪರ್ಕ ಜಾಲವನ್ನು ಶ್ರವಣಬೆಳಗೊಳ ಮಾರ್ಗವಾಗಿಯೇ ಹಾದು ಹೋಗುವಂತೆ ಮಾಡುವಲ್ಲಿ ತಾವು ಶ್ರಮಿಸಿದ ರೀತಿ, ಆಗಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದು, ಸಾಕಾರವಾಗುವವರೆಗೂ ಪರಿಶೀಲಿಸಿದ್ದು ಶ್ರವಣಬೆಳಗೊಳದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರದಿಡುವಂತಹದ್ದು.
ವಿಶಾಲ ಹಾಗೂ ಸುಸಜ್ಜಿತ ರೈಲ್ವೆ ಸ್ಟೇ?ನ್ ನಿರ್ಮಾಣಗೊಂಡು, ದೇಶದ ಮೂಲೆ ಮೂಲೆಗಳಿಂದ ಅತ್ಯಂತ ಸುಲಭವಾಗಿ ಯಾತ್ರಿಕರು ಶ್ರವಣಬೆಳಗೊಳಕ್ಕೆ ಬಂದು ತಲುಪುವಂತೆ ಮಾಡಿದ ನಿಮ್ಮ ಈ ಚಾರಿತ್ರಿಕ ಯೋಜನೆ, ಕ್ಷೇತ್ರದ ಚಹರೆಯನ್ನೇ ಸಂಪೂರ್ಣವಾಗಿ ಬದಲಾಯಿಸಿದೆ ಎಂದರೆ ತಪ್ಪಾಗಲಾರದು. * ಮಹಾಮಸ್ತಕಾಭಿ?ಕ ಮಹೋತ್ಸವಗಳ ಅನನ್ಯ ಸೇವೆ ಹಾಗೂ ಭಕ್ತಿಪೂರ್ವಕ ಸಾಧನೆ. ೧೨ ವ?ಗಳಿಗೊಮ್ಮೆ ಜರುಗುವ ವಿಶ್ವಪ್ರಸಿದ್ಧ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿ?ಕ ಮಹೋತ್ಸವಗಳ ಸಂದರ್ಭದಲ್ಲಿ ತಾವು ಸಲ್ಲಿಸಿದ ಸೇವೆ ವರ್ಣನಾತೀತ.
ರಾಜ್ಯ-ಕೇಂದ್ರ ಸರ್ಕಾರಗಳ ಗಮನ ಸೆಳೆದು ಶ್ರವಣಬೆಳಗೊಳ ನಗರಾಭಿವೃದ್ಧಿಗೆ ಅನುದಾನ: ತಮ್ಮ ಸುದೀರ್ಘ ರಾಜಕೀಯ ಜೀವನದುದ್ದಕ್ಕೂ ಜರುಗಿದ ಎಲ್ಲಾ ಮಹಾಮಸ್ತಕಾಭಿ?ಕಗಳ ವೇಳೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನವನ್ನು ಶ್ರವಣಬೆಳಗೊಳದತ್ತ ಸೆಳೆದು, ನೂರಾರು ಕೋಟಿ ರೂಪಾಯಿಗಳ ವಿಶೇ? ಅನುದಾನಗಳನ್ನು ಒದಗಿಸಿ ಕೊಟ್ಟಿದ್ದೀರಿ.
ಶ್ರವಣಬೆಳಗೊಳದಲ್ಲಿ ಅಭಿವೃದ್ಧಿ ಕಾಮಗಾರಿಗಳು. ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳ ಅಗಲೀಕರಣ, ಕುಡಿಯುವ ನೀರು, ವಿದ್ಯುತ್ ಹಾಗೂ ತಾತ್ಕಾಲಿಕ ನಗರಗಳ ನಿರ್ಮಾಣಕ್ಕೆ ಸರ್ಕಾರದ ಹಂತದಲ್ಲಿ ಸಂಪೂರ್ಣ ಬೆಂಬಲ ನೀಡಿ, ಮಹಾಮಸ್ತ ಕಾಭಿ?ಕಗಳು ಜಾಗತಿಕ ಮಟ್ಟದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಲು ಪ್ರಮುಖ ಕಾರಣಕರ್ತರಾಗಿದ್ದೀರಿ.

ಇಳಿವಯಸ್ಸಿನ ಅಪೂರ್ವ ಭಕ್ತಿ ಸಮರ್ಪಣೆ.

೨೦೧೮ರ ಮಹಾಮಸ್ತಕಾಭಿ?ಕದ ಶುಭ ಸಂದರ್ಭದಲ್ಲಿ, ತಮ್ಮ ೮೪ ವ?ದ ಇಳಿವಯಸ್ಸಿನಲ್ಲೂ, ಶಾರೀರಿಕ ಶ್ರಮವನ್ನು ಲೆಕ್ಕಿಸದೆ, ಯಾರ ನೆರವೂ ಇಲ್ಲದೆ ತಾವು ಸ್ವತಃ ತಮ್ಮ ಕಾಲ್ನಡಿಗೆಯಲ್ಲೇ ವಿಂಧ್ಯಗಿರಿ ಬೆಟ್ಟದ ಏಳು ನೂರು ಕಲ್ಲಿನ ಮೆಟ್ಟಿಲುಗಳನ್ನು ಏರಿ, ನನ್ನ ಭಗವಾನ್ ಬಾಹುಬಲಿ ಸ್ವಾಮಿಗೆ ನಾನು ಸ್ವತಃ ಅಭಿ?ಕ ಮಾಡಬೇಕು ಎಂಬ ದೃಢ ಸಂಕಲ್ಪದಿಂದ ಭಕ್ತಿಯಿಂದ ಅಭಿ?ಕ ನೆರವೇರಿಸಿದ ನಿಮ್ಮ ಚಿತ್ರಣ ಇಡೀ ಜಗತ್ತಿನ ಭಕ್ತ ಸಮುದಾಯದ ಮನಸ್ಸಿನಲ್ಲಿ ದಿವ್ಯ ಹಾಗೂ ಚಿರಸ್ಮರಣೀಯ ನೆನಪಾಗಿ ಉಳಿದಿದೆ.

ಶ್ರೀ ಅಂಬಿಕಾ ವಿದ್ಯಾಲಯದ ನೂತನ ಭವ್ಯ ಕಟ್ಟಡದ ಲೋಕಾರ್ಪಣೆ. ಶಿಕ್ಷಣದ ಇಂದು ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ, ಆಧುನಿಕ ದಿವ್ಯ ದೇಗುಲವಾಗಿ ೯೦,೦೦೦ ಚದರ ಅಡಿಯ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಶ್ರೀ ಅಂಬಿಕಾ ವಿದ್ಯಾಲಯದ ನೂತನ ಭವ್ಯ ಕಟ್ಟಡದ ಲೋಕಾರ್ಪಣೆ ಜರುಗುತ್ತಿದೆ.
ಶೈಕ್ಷಣಿಕ ಈ ಕ್ಷೇತ್ರಕ್ಕೆ ತಾವು ಸಲ್ಲಿಸಿದ ಅಪಾರ, ನಿ?ಮ ಹಾಗೂ ಐತಿಹಾಸಿಕ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಮತ್ತು ತಮ್ಮ ಕೊಡುಗೆಗಳನ್ನು ಸದಾ ಸ್ಮರಿಸುವ ನಿಟ್ಟಿನಲ್ಲಿ, ಗ್ರಾಮೀಣ ಭಾಗದ ಈ ಭವ್ಯ ದೇಗುಲವು ನಿಮ್ಮ ಶುಭ ಅಮೃತಹಸ್ತಗಳಿಂದಲೇ ಉದ್ಘಾಟನೆಗೊಳ್ಳಬೇಕು ಎಂಬುದು ಶ್ರೀಮಠದ ಆಶಯವಾಗಿತ್ತು. ನಿಮ್ಮ ಉಪಸ್ಥಿತಿಯಿಂದ ಈ ಉದ್ಘಾಟನಾ ಸಮಾರಂಭವು ಅತ್ಯಂತ ಮಂಗಳಕರ ಹಾಗೂ ಐತಿಹಾಸಿಕ ಎತ್ತರವನ್ನು ಪಡೆದುಕೊಂಡಿದೆ.
ಯುಗಪುರು? ಚಾವುಂಡರಾಯರ ಸಾಧನೆ ಹಾಗೂ ಚಾವುಂಡರಾಯ ಪ್ರಶಸ್ತಿ ಸಮರ್ಪಣೆ. ಸುಮಾರು ೨೩೦೦ ವ?ಗಳ ಸುದೀರ್ಘ ಹಾಗೂ ಅಪೂರ್ವ ಇತಿಹಾಸ ಹೊಂದಿರುವ ಶ್ರೀ ಕ್ಷೇತ್ರ ಶ್ರವಣ ಬೆಳಗೊಳವು, ಪ್ರಾರಂಭಿಕ ದಿನಗಳಲ್ಲಿ ಮುಖ್ಯವಾಗಿ ಸಾಧು-ಸಂತರು ಹಾಗೂ ಶ್ರಮಣರ ಸಮಾಧಿ ಭೂಮಿಯಾಗಿ, ತಪೋಭೂಮಿಯಾಗಿದ್ದಿತು. ಆದರೆ,
೧೦ನೇ ಶತಮಾನದ ಅವಧಿಯಲ್ಲಿ ಗಂಗ ಸಾಮ್ರಾಜ್ಯದ ಮಹಾಮಂತ್ರಿ, ಮಹಾ ಸೇನಾಧಿಪತಿ ಹಾಗೂ ಶ್ರೇ? ಜೈನ ಶ್ರಾವಕರಾದ ಚಾವುಂಡರಾಯರು ವಿಂಧ್ಯಗಿರಿಯ ತುದಿಯಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಏಕಶಿಲಾ ಮಹಾ ಮೂರ್ತಿಯನ್ನು ನಿರ್ಮಿಸಿ, ಶ್ರವಣಬೆಳಗೊಳ ಜೈನ ಮಠವನ್ನು ಸ್ಥಾಪಿಸಿ, ಈ ಊರನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಿದರು. ಶ್ರವಣಬೆಳಗೊಳಕ್ಕೆ ವಿಶ್ವ ವಿಖ್ಯಾತಿಯನ್ನು, ಜಾಗತಿಕ ಮಾನ್ಯತೆಯನ್ನು ತಂದುಕೊಟ್ಟ ಮಹಾನ್ ಅಭಿವೃದ್ಧಿಯ ಹರಿಕಾರ ಚಾವುಂಡರಾಯರು. ಅಂದು ೧೦ನೇ ಶತಮಾನದಲ್ಲಿ ಶ್ರೀ ಕ್ಷೇತ್ರದ ಸಮಗ್ರ ವಿಕಾಸಕ್ಕೆ ಹಾಗೂ ಜಾಗತಿಕ ಪ್ರಸಿದ್ಧಿಗೆ ಚಾವುಂಡರಾಯರು ಹೇಗೆ ಕಾರಣರಾದರೋ, ಅದೇ ರೀತಿಯಾಗಿ ೨೦ ಮತ್ತು ೨೧ನೇ ಶತಮಾನದಲ್ಲಿ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸರ್ವತೋಮುಖ ಪ್ರಗತಿಗೆ, ಮೂಲಭೂತ ಸೌಕರ್ಯಗಳ ವಿಸ್ತರಣೆಗೆ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡರ ಕೊಡುಗೆ ಹಾಗೂ ಸೇವೆ ಅತ್ಯಂತ ಚಿರಸ್ಮರಣೀಯವಾದದ್ದು.

ಆಶೀರ್ವಾದಗಳೊಂದಿಗೆ.
ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ
ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು
ಶ್ರೀ ಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠ.
ಶ್ರೀಕ್ಷೇತ್ರ ಶ್ರವಣಬೆಳಗೊಳ,
ಹಾಸನ ಜಿಲ್ಲೆ.

#HDD#Shravanabelagola#Honours#Chavundaraya
VIJAY KUMAR H L 0 followers