ದೇಶಕ್ಕೆ ಸ್ವತಂತ್ರ ಸಕ್ಕಿದೆ ಆದರೆ ಹುಮನಾಬಾದ ಮತಕ್ಷೇತ್ರದ ಅನೇಕರಿಗೆ ಇನ್ನೂ ಸ್ವಾತಂತ್ರ ಸಿಕ್ಕಿಲ್ಲ. ಎಂದು ಹೆಸರು ಹೇಳದನೆ ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಶಾಸಕ ಡಾ. ಸಿದ್ದಲಿಂಗಪ್ಪಾ ಪಾಟೀಲ್ ಟೀಕಾ ಪ್ರಹಾರ ಮಾಡಿದರು.
ಪಟ್ಟಣದ ಥೇರ ಮೈದಾನದಲ್ಲಿ ಭಕ್ತ ಕನಕದಾಸ ಜಯಂತಿ ಉತ್ಸವ ಸಮಿತಿ ಹುಮನಾಬಾದ. ವತಿಯಿಂದ 538 ನೇ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಸಮಾಜದ ಮೇಲೆ ದಬ್ಬಾಳಿಕೆ ಮಾಡುವವರಿಗೆ ಸಮಾಜದವರು ಶಾಶ್ವತ ಮನೆಯಲ್ಲಿ ಕುಡಿಸುವ ಕೇಲಸ ಮಾಡಬೇಕಾಗಿದೆ. ಅಂದಾಗ ಮಾತ್ರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸವಿಧಾನಕ್ಕೆ ಗೌರವ ಸಲ್ಲಿಸದಂತ್ತಾಗುತ್ತದೆ ಎಂದು ಹೇಳಿದ ಅವರು. ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರು ಪ್ರಜ್ಞಾವಂತರಾಗಬೇಕು. 20 ವರ್ಷ ರಾಜಕೀಯ ಮಾಡಿದ್ದಿನಿ ಎಂದು ಹೇಳುವವರು ಒಂದು ಸಮುದಾಯ ಭವನ ಅಥವಾ ಕನಕದಾಸರ, ಸಂಗೋಳಿ ರಾಯಣ್ಣ ಮೂರ್ತಿ ಎಲ್ಲಾದರು ಸ್ಥಾಪಿಸಲು ಮುಂದಾಗಿರುವ ಉದಾಹರಣೆ ಹೇಳಿ. ಇಂದು ಬೀರಲಿಂಗೇಶ್ವರ ಸಮುದಾಯ ಭವನಕ್ಕೆ 1 ಕೋಟಿ. ಕೋಳಿ ಗಂಗಾಮತ ಸಮುದಾಯಕ್ಕೆ 1 ಕೋಟಿ ಅನುದಾನ ಮಂಜುರು ಮಾಡುವ ಮೂಲಕ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮಂಜುರು ಮಾಡುವ ಮೂಲಕ ಕ್ಷೇತ್ರದ ಪ್ರತಿಯೊಂದು ಸಮುದಾಯ ಮೇಲೆ ಎತ್ತುವ ಕೆಲಸ ಮಾಡುತ್ತಿದ್ದೆನೆ.
ಸಮುದಾಯದ ಜಯಂತಿ ಉತ್ಸವಗಳು ಪಕ್ಷಾತ್ತಿತವಾಗಿ ಆಚರಿಸಿದಾಗ ಮಾತ್ರ ಅರ್ಥ ಪೂರ್ಣವಾಗುತ್ತದೆ. ಹುಮನಾಬಾದ ಮತಕ್ಷೇತ್ರದ ಜನತೆ ಇನ್ನೂ ಜಾಗೃತರಾಗಬೇಕಾಗುತ್ತದೆ. ಅನೇಕ ಸಮಾಜದ ಮುಖಂಡರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮನಸ್ಸು ಇದೆ. ಭಯದಿಂದ ಬರುತ್ತಿಲ್ಲ. ರಾಜ ಮಹಾರಾಜರ ಕಾಲದಲ್ಲಿ ಅಂಜುವುದು, ಅಂಜಿಸುವುದು ಇತ್ತು. ಇದೀಗ ಏನೆ ಇದ್ದರು ಅದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನ ಇದೆ. ಒಂದು ವೇಳೆ ಅಂಜಿದರೆ ನಾನ್ನು ಶಾಸಕನಾಗುತ್ತಿರಲಿಲ್ಲ. ಎಂದು ಹೇಳಿದರು.
ಮಾಜಿ ಸಚಿವ ಬಂಡೆಪ್ಪಾ ಖಾಶೆಂಪೂರೆ ಮಾತನಾಡಿ. ಸರ್ಕಾರದ ಸೌಲಭ್ಯ ಪಡೆದುಕೊಂಡು.ನಾವು ಎಷ್ಟೆ ವಿದ್ಯಾವಂತರಾದರು ನಮ್ಮ ಕುಲ ಕಸಬು ಕುರಿ ಕಾಯುವುದು. ಮಾರಾಟ ಮಾಡುವುದು ಎಂದಿಗೂ ಬೀಡಬೇಡಿ. ಇದರಲ್ಲಿ ಸೀಗುವ ಲಾಭ ಬ್ಯಾಂಕಗಳಲ್ಲಿ ಇಡುವ ಠೇವಣಿಗು ಸೀಗುವದಿಲ್ಲ. ಇದರಿಂದ ಅನೇಕರು ಮನೆ, ಹೊಲಗಳು ಖರೀದಿ ಮಾಡಿದ್ದಾರೆ ಎಂದು ಸಮಾಜಕ್ಕೆ ಕಿವಿ ಮಾತು ಹೇಳಿದರು.
ಮಾಜಿ ಸಭಾಪತಿ ರಘುನಾಥ ಮಲ್ಕಾಪೂರೆ ಮಾತನಾಡಿ. ದೇಶದಲ್ಲಿ ವಿಜಯನಗರ ಸ್ಥಾಪನೆ, ಬ್ರೀಟಿಷರ ವಿರುದ್ಧ ಹೋರಾಟ, ದೇವಸ್ಥಾನಗಳ ಪುನಃ ನಿರ್ಮಾಣ ಸೇರಿದಂತೆ ಅನೇಕ ಕೋಡುಗೆಗಳು ಸಮುದಾಯ ನಮ್ಮದಾಗಿದೆ ಎಂದು ಹೇಳಿದರು.
- ಬ್ಯಾಂಕ ರೆಡ್ಡಿ, ಅಂಕುಶ ಗೋಖಲೆ ಸಮಾಜದ ಕುರಿತು ಮಾಹಿತಿ ನೀಡಿದರು. ಇದರಿಂದ ಆಗುವ ಕಲಬುರ್ಗಿ ವಿಭಾಗ ತಿಂಥಣಿ ಬ್ರೀಜ್ ಕಾಗಿನೇಲೆ ಶಾಖಾ ಮಠ ಚಿಕ್ಕಲಿಂಗ ಬೀರದೇವರು, ಬಸವಕಲ್ಯಾಣ ತಾಲೂಕಿನ ಉಚ್ಚಾ ಗೋಪಾಲ ಮುತ್ಯಾ, ಸಿಂಧನಕೇರಾ ಪೂಜ್ಯ ಶ್ರೀ ಪ್ರವಿಣ ಪೂಜಾರಿ ಸ್ವಾಮೀಜಿ, ನಾರಾಯಣ ರಾಂಪೂರೆ, ಸಂತೋಷ ಪಾಟೀಲ್, ಪಂಡಿತರಾವ ಚಿದ್ರಿ, ಶಿವರಾಜ ಚೀನಕೇರಾ, ಅನೀಲ್ ಪಸರ್ಗಿ, ನಾಗಭೂಷಣ ಸಂಗಮಕರ್, ರವಿಕುಮಾರ ಹೊಸಳ್ಳಿ, ಯಲ್ಲಪ್ಪ, ಅರುಣ ಬೌಗಿ, ಪರಮೇಶ್ವರ ಕಾಳಮದರ್ಗಿ, ಶಿವಶಂಕರ ತರನಳ್ಳಿ, ಸಂತೋಷ ನಾವದಗಿ, ಅರ್ಜುನ ನಾಯಕ, ವಿನಾಯಕ, ಪ್ರಕಾಶ ತಿಬ್ಬಶಟ್ಟಿ, ರವಿ ನಿಜಾಂಪೂರೆ ಸೇರಿದಂತೆ ಅನೇಕರು ಇದ್ದರು.
