April 14, 2026

ಮೈಸೂರಿನ ಕಾನೂನು ಸುವ್ಯವಸ್ಥೆಯ ಅಧಿಕಾರಿ ನೇಮಕಕ್ಕೆ ತಡೆಯುತ್ತಿರುವವರು ಯಾರು !!??

ಸಿಎಂ ತವರಿನಲ್ಲಿ ಡಿಸಿಪಿ 1 ಹುದ್ದೆ ಖಾಲಿ…54 ದಿನ ಉರುಳಿದ್ರೂ ಭರ್ತಿ ಮಾಡದ ಸರ್ಕಾರ…ಸಾಕಷ್ಟು ಚರ್ಚೆಗೆ ಗ್ರಾಸವಾದ ನಡೆ…

ಸಿಎಂ ತವರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹುದ್ದೆ ಖಾಲಿ ಬಿದ್ದಿದೆ.ಡಾ.ಬಿಂದುಮಣಿ ವರ್ಗಾವಣೆಯಾಗಿ 54 ದಿನ ಕಳೆದರೂ ಸದರಿ ಸ್ಥಳಕ್ಕೆ ಸರ್ಕಾರ ಮತ್ತೊಬ್ಬ ಪೊಲೀಸ್ ಅಧಿಕಾರಿಯನ್ನ ನಿಯೋಜಿಸಿಲ್ಲ.ಹಿಂದೆಂದೂ ಇಷ್ಟೊಂದು ಗ್ಯಾಪ್ ನೀಡದ ಸರ್ಕಾರ ಈ ಭಾರಿ ನೂತನ ಡಿಸಿಪಿ ನಿಯೋಜನೆ ಮಾಡಲು ವಿಳಂಬ ಧೋರಣೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಸಧ್ಯ ಸಾಂಸ್ಕೃತಿಕ ನಗರಿ ಮೈಸೂರು ಮಾದಕ ವಸ್ತುಗಳ ತಯಾರಿ ಘಟಕಗಳ ಭದ್ರಕೋಟೆಯಾಗುತ್ತಿದೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ಇದಕ್ಕೆ ಪೂರಕವೆಂಬಂತೆ ಎರಡು ತಯಾರಿಕಾ ಘಟಕಗಳು ಪತ್ತೆಯಾಗಿರೋದು.ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಯೂ ನಿಯಂತ್ರಣದಲ್ಲಿ ಇಲ್ಲ.ಪದೇ ಪದೇ ಜರುಗುತ್ತಿರುವ ಕೊಲೆ ಪ್ರಕರಣಗಳು ಈ ಆರೋಪಕ್ಕೆ ಪುಷ್ಠಿ ನೀಡುತ್ತಿವೆ.ಡ್ರಗ್ಸ್ ಮುಕ್ತ ಮೈಸೂರು ಮಾಡಲು ನಗರ ಖಾಕಿ ಪಡೆ ಹರಸಾಹಸ ನಡೆಸುತ್ತಿದ್ದರೆ ಖಾಲಿ ಇರುವ ಜಾಗವನ್ನ ಭರ್ತಿ ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ.ಸರ್ಕಾರದ ವಿಳಂಬ ನೀತಿಗೆ ಕಾರಣವೇನೋ ಗೊತ್ತಿಲ್ಲ.ಸಮರ್ಪಕ ಅಧಿಕಾರಿ ಸಿಕ್ಕಿಲ್ಲವೆಂದೋ ಅಥವಾ ಲಾಬಿಯೋ ಗೊತ್ತಿಲ್ಲ.ಸಧ್ಯ ಮೈಸೂರಿನಲ್ಲಿ ಮಾದಕ ವಸ್ತುಗಳ ತಯಾರಿ ಘಟಕಗಳು ಪತ್ತೆಯಾದ ಹಿನ್ನಲೆ ಇಡೀ ದೇಶವೇ ತಿರುಗಿ ನೋಡುವಂತಹ ಸಂಧರ್ಭದಲ್ಲಿ ಡಿಸಿಪಿ 1 ಹುದ್ದೆಗೆ ಸೂಕ್ತ ಅಧಿಕಾರಿಯನ್ನ ನಿಯೋಜಿಸಬೇಕಾಗಿರುವುದು ಗಂಭೀರ ವಿಚಾರ.ಸಿಎಂ ತವರು ಕ್ಷೇತ್ರದಲ್ಲೇ ಹೀಗಾದ್ರೆ ಬೆಂಗಳೂರು ಹಾಗೂ ಗ್ರಾಮಾಂತರ ಪ್ರದೇಶಗಳ ಕಥೆಯೇನು. ನಗರ ವ್ಯಾಪ್ತಿಯಲ್ಲಿ ಈಗಾಗಲೇ ಎನ್ ಆರ್ ಠಾಣೆ ಇನ್ಸ್ಪೆಕ್ಟರ್ ತಳವಾರ್ ಬಡ್ತಿ ಪಡೆದ ಕಾರಣ ಜಾಗ ತೆರುವಾಗಿದೆ.ಈ ಠಾಣೆಗೂ ಇನ್ನೂ ಇನ್ಸ್ಪೆಕ್ಟರ್ ಬಂದಿಲ್ಲ.ಇನ್ನು ಜಿಲ್ಲೆ ಪರಿಸ್ಥಿತಿ ಕೇಳುವಂತೆಯೇ ಇಲ್ಲ.ಹುಣಸೂರು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಮುನಿಯಪ್ಪ ನಿವೃತ್ತಿಯಾಗಿದ್ದಾರೆ.ತಲಕಾಡು ಹಾಗೂ ಬನ್ನೂರು ಠಾಣೆ ಪಿಐ ವರ್ಗಾವಣೆ ಆಗಿದ್ದಾರೆ.ಸದರಿ ಠಾಣೆಗಳಿಗೂ ಸಹ ಅಧಿಕಾರಿಗಳನ್ನ ನಿಯೋಜಿಸಿಲ್ಲ.ಇನ್ಸ್ಪೆಕ್ಟರ್ ಗಳ ಜಾಗ ತೆರುವಾಗಿ ತಿಂಗಳು ಉರುಳಿದ್ರೂ ಹೊಸ ಅಧಿಕಾರಿಗಳ ನೇಮಕವಾಗಿಲ್ಲ.ಅಧಿಕಾರಿಗಳ ವರ್ಗಾವಣೆ ಕುರಿತಂತೆ ವಿರೋಧ ಪಕ್ಷ ಸಾಕಷ್ಟು ಠೀಕಿಸುತ್ತಿವೆ ಅದ್ರಲ್ಲೂ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ರನ್ನ ಟಾರ್ಗೆಟ್ ಮಾಡಿಕೊಂಡಿವೆ.ವರ್ಗಾವಣೆ ಮಾಡುವುದೇ ಇವರ ಕೆಲಸ ಎಂದು ಆರೋಪಿಸುತ್ತಿವೆ.ಯತೀಂದ್ರ ಸಿದ್ದರಾಮಯ್ಯ ರವರಿಗೂ ಸಹ ಡಿಸಿಪಿ 1 ಜಾಗ ಖಾಲಿ ಇರುವುದು ಇವರ ಗಮನಕ್ಕೆ ಬಂದಿಲ್ಲವೇ…?ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಮ್ಮೆ ಪ್ರಶ್ನೆ ಏನೆಂದ್ರೆ ಡಿಸಿಪಿ 1 ಸ್ಥಾನಕ್ಕೆ ಸೂಕ್ತ ಹಾಗೂ ಸಮರ್ಥ ಅಧಿಕಾರಿ ಇಲ್ಲವೇ…? ಅಥವಾ ಲಾಭಿ ನಡೆಯುತ್ತಿದೆಯೇ…? ಸ್ಪಷ್ಟವಾಗಿ ತಿಳಿಸಬೇಕಿದೆ…

ಕೃಪೆ tv೨೪

Mohammed A Haneef

Haneef A

District Reporter

Leave a Reply

Your email address will not be published. Required fields are marked *

INDIAN PRESS UNION

Indian Press Union (IPU) A National Platform for Journalists and Media Professionals.

© 2026 All Rights Reserved IPU MEDIA ASSOCIATION