ಅಸಂಘಟಿತ ಕಾರ್ಮಿಕರು ಕಡ್ಡಾಯವಾಗಿ ಕಾರ್ಮಿಕರ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡು ಸರ್ಕಾರದ ವಿವಿಧ ಸೌಲಭ್ಯ ಪಡೆಯಬೇಕು ಎಂದು ಹುಮನಾಬಾದ ಹಾಗೂ ಔರಾದ ಕಾರ್ಮಿಕ ನೀರಿಕ್ಷಕ ರಾಹುಲ ಬಸವರಾಜ ಮಾಳಗೆ ಹೇಳಿದರು.

ಪಟ್ಟಣದ ಸೋಮವಂಶಿ ಆರ್ಯ ಕ್ಷತ್ರೀಯ ಸಮುದಾಯ ಭವನದಲ್ಲಿ ಕರ್ನಾಟಕ ದ್ವಿಚಕ್ರ ವಾಹನ ದುರಸ್ತಿಗಾರ ಹಾಗೂ ದ್ವಿಚಕ್ರ ವಾಹನಗಳ ಬಿಡಿಭಾಗಗಳ ವ್ಯಪಾರಸ್ಥರ ಸಂಘದಿAದ ಆಯೋಜಿಸಿದ ಸಭೆಯನ್ನು ಉದ್ಘಾಟಿಸಿ ಬಲಿಕ ಭೀತಿ ಪತ್ರ ಬೀಡುಗಡೆಗೊಳಿಸಿ ಮಾತನಾಡಿದ ಅವರು. ಕಾಯಕ ಸಮುದಾಯಗಳಲ್ಲಿ ಒಂದಾಗಿರುವ ದ್ವಿಚಕ್ರ ವಾಹನಗಳ ದುರಸ್ತಿಗಾರರನ್ನು ಸಂಘಟಿಸಿ ಸಂಘಟನೆಯೊAದನ್ನು ಅಸ್ಥಿತ್ವಕ್ಕೆ ತಂದು ಸರ್ಕಾರದ ಸೌಲಭ್ಯಗಳು ಕುರಿತು ಕಾರ್ಯಕ್ರಮಗಳ ಆಯೋಜನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಯಾಗಿದೆ.

ದೇಶದಲ್ಲಿ ಕಾರ್ಮಿಕರ ಕೊಡುಗೆ ಅತ್ಯಂತ ಮಹತ್ವದಾಗಿದ್ದು, ಕಾರ್ಮಿಕರು ಕೆಲಸದ ಸಂದರ್ಭದಲ್ಲಿ ಅಪಘಾತವಾಗಿ ಮರಣ ಹೊಂದಿದರೆ 5 ಲಕ್ಷ ಪರಿಹಾರ ಅಥವಾ ದುರ್ಬಲತೆ ಉಂಟಾದಲ್ಲಿ 2 ಲಕ್ಷ ಸೇರಿದಂತೆ ಎಲ್ಲ ಕಾರ್ಮಿಕರಿಗೂ ಸಮಾನತೆ ನೀಡುವ ಉದ್ದೇಶ ಇಲಾಖೆ ಹೊಂದಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ ಅಡಿಯಲ್ಲಿ ಬರುವ ನಮ್ಮ ಇಲಾಖೆಯಲ್ಲಿ ಪ್ರತಿಯೊಬ್ಬ ಕಾರ್ಮಿಕರು 50 ರೂ. ಪಾವತಿ ಮಾಡಿ ಕಾರ್ಮಿಕ ನೋಂದಣಿ ಮಾಡಿಸಿಕೊಳ್ಳಬೇಕು. ಸರಕಾರ ಅಸಂಘಟಿತ ಕಾರ್ಮಿಕರ ಯೋಗಕ್ಷೇಮಕ್ಕಾಗಿ ಸಾರ್ವಜನಿಕರಿಂದ ಶೇ.1ರಷ್ಟು ಸೆಸ್ ರೂಪದಲ್ಲಿ ಸಂಗ್ರಹಿಸಿ ಕಾರ್ಮಿಕರಿಗೆ ಸೌಲಭ್ಯ ನೀಡುತ್ತಿದೆ ಎಂದರು.

ವೈದ್ಯಕೀಯ ನೆರವು. ಹೆರಿಗೆ ಸೌಲಭ್ಯ. ವಸತಿ ಸೌಲಭ್ಯ. ಪಿಂಚಣಿ. ಶಿಕ್ಷಣ. ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯ ಸೀಗಲಿದ್ದು ಕಾರ್ಮಿಕ ಇಲಾಖೆಯಿಂದ ಪ್ರತಿಯೊಬ್ಬರು ಅಂಗಡಿ ಹಾಗೂ ಕಾರ್ಮಿಕರ ನೋಂದಣಿ ಮಾಡಿಸಿದಲ್ಲಿ ಈ ಸೌಲಭ್ಯಗಳು ಸೀಗಲಿದೆ. ಇದಕ್ಕೆ ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಆಧಾರ್‌ನೊಂದಿಗೆ ಲಿಂಕ್ ಆದ ಮೊಬೈಲ್ ಸಂಖ್ಯೆ ಅರ್ಜಿ ಸಲಿದಲ್ಲಿ ಸೌಲಭ್ಯಗಳು ದೊರೆಯಲಿದೆ ಎಂದು ಮಾಹಿತಿ ನೀಡಿದರು.

ದ್ವಿಚಕ್ರ ವಾಹನ ದುರುಸ್ತಿಗಾರ ಸಂಘ ಅಧ್ಯಕ್ಷ ದೇವಾನಂದ ಘವಾಳಕರ ಮಾತನಾಡಿ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ತಂತ್ರಜ್ಞಾನವಿರುವ ದ್ವಿಚಕ್ರ ವಾಹನ ದುರಸ್ತಿಗಾರರಿಗೆ ಆಧುನಿಕ ತಂತ್ರ ಜ್ಞಾನಕ್ಕೆ ಅನುಗುಣವಾಗಿ ತರಬೇತಿ ನೀಡಿ, ಆರ್ಥಿಕವಾಗಿ ಅಭಿವೃದ್ಧಿ ಸಾಧಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಕಾರ್ಯಾಗಾರವನ್ನು ಆಯೋಜಿಸಲಾಗುತ್ತದೆ ಎಂದು ಹೇಳಿದರು.

ಉಪಾಧ್ಯಕ್ಷ ಮುಬಾರಕಮಿಯ್ಯ ಸೈಯದಮಿಯ್ಯ, ಕಾರ್ಯದರ್ಶಿ ಬಸವರಾಜ ಸಿಂಧನಕೇರಾ, ಎಂ.ಡಿ ಗೌಸೋದ್ದಿನ್, ನಾಸೀರಖಾನ್ ಪಠಾಣ, ಸಂಜೀವಕುಮಾರ ಸಾಗರ, ಕಲ್ಲಯ್ಯ ಸ್ವಾಮಿ, ಜಗದೀಶಸಿಂಗ್, ಪುನೀತಕುಮಾರ, ದಿನೇಶಕುಮಾರ ಪೋಕರರಾಮ, ನರಸಿಂಗರಾವ ರಾಜು, ಗೌತಮ, ಪವನ ಸಾಳುಂಕೆ, ಸಂಜುಕುಮಾರ ಉಪ್ಪಾರ. ಕಾರ್ಮಿಕ ಇಲಾಖೆ ಸಹಾಯಕ ಅಧಿಕಾರಿ ಲಕ್ಷಿö್ಮಣ ಗಾದಗಿ ಸೇರಿದಂತೆ ಅನೇಕರಿದ್ದರು.

Visited 7 times, 1 visit(s) today
Share.
Leave A Reply

Uploading your documents

Please do not close or refresh this window.
This may take a few seconds.

Exit mobile version